Thursday, July 22, 2010

ವೀಡಿಯೋ ಕವನಗಳು

೧೯೭೫ನೇ ಇಸವಿಯಿಂದಲೂ ನನಗೆ ಸಿನಿಮಾ ಅಧ್ಯಯನದ ಹುಚ್ಚು. ೨೦೦೫ರ ಹೊತ್ತಿಗೆ ಹತ್ತಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿದ ಅನಂತರ ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಒಂದು ಗಂಟೆಯ ಜ್ಯೋತ್ಸ್ನಾ ಎಂಬ ಚಿತ್ರವನ್ನು ಮಾಡಿದೆ. ಈ ಹೊತ್ತಿನಲ್ಲಿ ಸುಮಾರು ೧೩೦ರಷ್ಟು ಶೈಕ್ಷಣಿಕ ಚಿತ್ರಗಳನ್ನು ಮಾಡಿ ಮುಗಿಸಿದ್ದೆ. ಈ ಹೊತ್ತಿನಲ್ಲಿ ಅನ್ನಿಸಿದ್ದು ನಾವು ಅಕ್ಷರ ರೂಪದಲ್ಲಿ ಕವನ ಬರೆಯುತ್ತೇವಲ್ಲ, ಹಾಗೆ ವೀಡಿಯೋ ಕ್ಯಾಮರಾದ ಮೂಲಕ ಏಕೆ ವೀಡಿಯೋ ಕವನ ಮಾಡಬಾರದು ಎಂಬ ಆಲೋಚನೆ ಬಂತು. ಇಲ್ಲಿ ಕವನ ಎಂದರೆ ಕವನದ ಗುಣ. ನನ್ನದೇ ವೀಡಿಯೋ ಕ್ಯಾಮರಾ, ಕಂಪ್ಯೂಟರ್ ಎಡಿಟಿಂಗ್, ಗ್ರಾಫಿಕ್ಸ್, ಸಂಗೀತ ಇತ್ಯಾದಿ. ಹೀಗೆ ಮುಂದುವರಿಯುತ್ತ ನನ್ನ ವೀಡಿಯೋ ಕವನಗಳ ಸಂಖ್ಯೆ ೬೦ ತಲಪಿದೆ. ಗೂಗಲ್ ಸರ್ಚ್‌ನಲ್ಲಿ ಇಂಗ್ಲಿಷಿನಲ್ಲಿ ಭವಾನಿ ಶಂಕರ್ ವೀಡಿಯೋ ಪೊಯಟ್ರಿ ಎಂದು ಕೊಡಿ. ವಿಕಿಪೀಡಿಯಾ ಮತ್ತು ನನ್ನ ವೀಡಿಯೋ ಕವನದ ಬ್ಲಾಗ್ ಜಾಜಿಮಲ್ಲಿಗೆಯನ್ನು ಪ್ರವೇಶಿಸಿ. ಗೂಗಲ್ ಸರ್ಚ್‌ನಲ್ಲಿ ಇಂಗ್ಲಿಷಿನಲಿ ಭವಾನಿ ಶಂಕರ್ ಜನ ರಥ ರಥ ಜನ ಎಂದು ಕೊಡಿ. ಯುಟ್ಯೂಬ್‌ನಲ್ಲಿ ಬರುವ ಈ ವೀಡಿಯೋ ಕವನವನ್ನು ನೋಡಿ. ಕೃತಜ್ಞತೆಗಳು.

No comments:

Post a Comment