ಇಂದಿನ ರಾಜಕಾರಣ
ಬಳ್ಳಾರಿ ಭೂಮಿತಾಯಿಯ ಮೇಲೆ ಗಣಿ ಅಗೆದು ಹುಟ್ಟಿಸಿದ ಸಾವಿರಾರು ಕೋಟಿ ರೂಪಾಯಿಗಳ ಕಪ್ಪು ಹಣ ಇಂದಿನ ಚರ್ಚೆಯ ಮುಖ್ಯ ವಿಷಯವಾಗಿದೆ. ದೇಶದ ಅಭಿವೃದ್ಧಿಗೆ ಕಾರಣವಾಗಬೇಕಿದ್ದ ರಾಜಕಾರಣ ಕೋಟಿಗಟ್ಟಲೆ ಹಣ ಮಾಡುವ ದಂಧೆಯಾಗಿದೆ. ಇವತ್ತು ಯಾವುದೇ ಪಕ್ಷದ ರಾಜಕಾರಣಿಯನ್ನು ನಂಬುವಂತಿಲ್ಲ. ಸಾರಾಯಿ, ಹಣ ಹಂಚಿ ಆಯ್ಕೆಯಾಗುವ ರಾಜಕಾರಣಿಗಳನ್ನು ಶುದ್ಧೀಕರಿಸಿದೆ ಈ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ರಾಜಕಾರಣಿಗಳನ್ನು ಶುದ್ಧೀಕರಿಸುವುದಾದರು ಹೇಗೆ? ಇಂದಿನ ರಾಜಕಾರಣಿಗಳು ಭ್ರಷ್ಟರಾಗಲು ಈ ದೇಶದ ಪ್ರಜೆಗಳು ಮತ್ತು ಮತದಾರರೆ ಕಾರಣ. ಸದ್ಯಕ್ಕೆ ನಾವು ತೆಗೆದುಕೊಳ್ಳಬಹುದಾದ ತೀರ್ಮಾನವೆಂದರೆ ಯಾವುದೇ ರಾಜಕಾರಣಿಯನ್ನು ಮತ್ತೆ ಆಯ್ಕೆ ಮಾಡಬಾರದು. ಯಾವುದೇ ರಾಜಕೀಯ ಪಕ್ಷ ಎರಡನೆ ಸಲ ಅಧಿಕಾರಕ್ಕೆ ಬರಬಾರದು. ಯಾವುದೇ ಪಕ್ಷಕ್ಕೆ ಬಹುಮತ ಸಿಗಕೂಡದು. ಇದರಿಂದಾಗಿ ದೇಶ ಸ್ವಲ್ಪವಾದರು ಉದ್ಧಾರವಾಗಬುದು-೧೫/೭/೨೦೧೦
No comments:
Post a Comment